1. |
ಪ್ರಕರಣದ ಸ್ಥಿತಿ, ವಿಚಾರಣೆಯ ಮುಂದಿನ ದಿನಾಂಕ ಮತ್ತು ಇತರ ವಿವರಗಳ ಕುರಿತು ವಿಚಾರಣೆಗಳನ್ನು ನಿರ್ವಹಿಸುವುದು. |
2. |
ಇ-ಫೈಲಿಂಗ್ ಅನ್ನು ಉತ್ತೇಜಿಸಲು ದಾಖಲೆಗಳನ್ನು ಸ್ಕ್ಯಾನ್ ಮಾಡುವ ಬಗ್ಗೆ , ಇ-ಸಹಿಗಳನ್ನು ಹಾಕುವ ಬಗ್ಗೆ ಮತ್ತು ಆ ದಾಖಲೆಗಳನ್ನು ಇ-ಫೈಲಿಂಗ್ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಬಗ್ಗೆ ವಿವರಿಸುವುದು. |
3. |
ಇ-ಪಾವತಿ ಪೋರ್ಟಲ್ ಮೂಲಕ ನ್ಯಾಯಾಲಯದ ಶುಲ್ಕಗಳನ್ನು ಪಾವತಿಸುವ ವಿಧಾನವನ್ನು ತಿಳಿಸುವುದು ಮತ್ತು ಸಹಾಯ ಒದಗಿಸುವುದು. |
4. |
ನ್ಯಾಯಾಲಯದ ದಾಖಲೆಗಳ ಪ್ರಮಾಣೀಕೃತ ಪ್ರತಿಗಳು ಮತ್ತು ಅಂತಹ ಇತರ ಸೇವೆಗಳಿಗಾಗಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಅಲು ನೆರವು ನೀಡುವುದು. |
5. |
Android ಮತ್ತು IOS ಗಳಲ್ಲಿ eCourtIs ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಬಳಸುವ ಬಗ್ಗೆ ಸಹಾಯ ಮಾಡುವುದು. |
6. |
ಡಿಜಿಟಲ್/ಆಧಾರ್ ಆಧಾರಿತ ಸಹಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಮತ್ತು ಆ ಸೇವೆಯನ್ನು ಪಡೆಯಲು ಸಹಾಯವನ್ನು ಒದಗಿಸುವುದು. |
7. |
ಕಾರಾಗೃಹದಲ್ಲಿರುವ ಸಂಬಂಧಿಕರನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಲು ವ್ಯವಸ್ಥೆ ಮಾಡುವುದು. |
8. |
ನ್ಯಾಯಾಲಯಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವಿಚಾರಣೆಯನ್ನು ಏರ್ಪಡಿಸುವ ಮತ್ತು ನಡೆಸುವ ವಿಧಾನವನ್ನು ವಿವರಿಸುವುದು. |
9. |
SMS ಸೇವೆಯನ್ನು ಒದಗಿಸಲು CIS ತಂತ್ರಾಂಶದಲ್ಲಿ ವಕೀಲರುಗಳ ನೋಂದಣಿ ಮಾಡುವುದು. |
10. |
ನ್ಯಾಯಾಲಯಗಳ ಸ್ಥಳ ಮತ್ತು ಅದರ ಪ್ರಕರಣ ಪಟ್ಟಿಯ ಕುರಿತು ಮಾಹಿತಿ ಒದಗಿಸುವುದು. |
11. |
ರಜೆಯಲ್ಲಿರುವ ನ್ಯಾಯಾಧೀಶರ ಬಗ್ಗೆ ಮಾಹಿತಿಯನ್ನು ಒದಗಿಸುವುದು. |
12. |
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುವುದು. |
13. |
ವರ್ಚುವಲ್ ನ್ಯಾಯಾಲಯದಲ್ಲಿ ಟ್ರಾಫಿಕ್ ಚಲನ್ ವಿಲೇವಾರಿ ಮಾಡಲು ಅನುಕೂಲ ಮಾಡುವುದು. |
14. |
eCourts ಯೋಜನೆಯಡಿಯಲ್ಲಿ ಲಭ್ಯವಿರುವ ಸೇವೆಗಳಿಗೆ ಸಂಬಂಧಿಸಿದಂತೆ ಸಹಾಯ ಒದಗಿಸುವುದು. |