ಮುಕ್ತಾಯ ಮಾಡು

    ಇತಿಹಾಸ

    ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೀದರ್ ನಗರದ ಹೃದಯ ಭಾಗದಲ್ಲಿ ನೆಲೆಗೊಂಡಿದೆ. ನ್ಯಾಯಾಲಯದ ಕಟ್ಟಡವನ್ನು ಪಾರಂಪರಿಕ ಕಟ್ಟಡವೆಂದು ಘೋಷಿಸಲಾಗಿದೆ, ಸದರಿ ನ್ಯಾಯಾಲಯವು ಹೈದರಾಬಾದ್ ನಿಜಾಮರ ಪ್ರಾಚೀನ ಕಾಲದಲ್ಲಿ 1328 ರ ಫಾಸ್ಲಿಯಲ್ಲಿ ಅಂದರೆ ಕ್ರಿ.ಶ.1938 ರಲ್ಲಿ ನಿರ್ಮಿಸಲಾಗಿದೆ, 1956 ರಲ್ಲಿ ರಾಜ್ಯಗಳ ಮರುಸಂಘಟನೆಯ ಮೊದಲು ಅಂದರೇ ಕ್ರಿ.ಶ. 1956 ರ ಬೀದರ್ ಜಿಲ್ಲೆ 13 ತಾಲೂಕುಗಳನ್ನು ಒಳಗೊಂಡಿತ್ತು. ಮರುಸಂಘಟನೆಯ ನಂತರ ತಾಲೂಕುಗಳ ಸಂಖ್ಯೆ ಐದಕ್ಕೆ ಇಳಿದಿದೆ. ಸದರಿ ತಾಲೂಕುಗಳ ಹೆಸರು ಔರಾದ್, ಬಸವಕಲ್ಯಾಣ, ಭಾಲ್ಕಿ, ಬೀದರ್,ಹುಮನಾಬಾದ ಮತ್ತು 2017 ರಲ್ಲಿ ಬೀದರ್ ಜಿಲ್ಲೆಗೆ ಹುಲಸೂರು, ಚಿಟಗುಪ್ಪ ಮತ್ತು ಕಮಲನಗರ ಮೂರು ಹೊಸ ತಾಲೂಕುಗಳನ್ನು ಸೇರಿಸಲಾಯಿತು.

    ಬೀದರ್ ನ್ಯಾಯಾಂಗ ಘಟಕವು ಈ ಕೆಳಗಿನ ನ್ಯಾಯಾಲಯಗಳನ್ನು ಒಳಗೊಂಡಿದೆ.

    1. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೀದರ.
    2. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೀದರ.
    3. ಪ್ರಧಾನ ಕುಟುಂಬ ನ್ಯಾಯಾಧೀಶ ನ್ಯಾಯಾಲಯ, ಬೀದರ.
    4. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ, ಬೀದರ.
    5. ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಬೀದರ.
    6. II-ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು, ಬೀದರ.
    7. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ II, ಬೀದರ.
    8. I-ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಬೀದರ.
    9. II-ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಬೀದರ.

    ಔರಾದ

    1. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಔರಾದ
    2. ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ , ಔರಾದ

    ಭಾಲ್ಕಿ

    1. II-ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೀದರ್ ಬಸವಕಲ್ಯಾಣದಲ್ಲಿ ಪೀಠ (ಶುಕ್ರವಾರ ಮತ್ತು -ಶನಿವಾರದಂದು ಸಂಚಾರಿ)
    2. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಭಾಲ್ಕಿ.
    3. ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ, ಭಾಲ್ಕಿ.

    ಬಸವಕಲ್ಯಾಣ

    1. II ಹೆಚ್ಚುವರಿ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೀದರ್, ಬಸವಕಲ್ಯಾಣದಲ್ಲಿ ಪೀಠ
    2. ಹಿರಿಯ ಸಿವಿಲ್ ನ್ಯಾಯಾಧೀಶ ಬಸವಕಲ್ಯಾಣ
    3. ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಬಸವಕಲ್ಯಾಣ.

    ಹುಮನಾಬಾದ

    1. ಹಿರಿಯ ಸಿವಿಲ್ ನ್ಯಾಯಾಧೀಶ ಹುಮನಾಬಾದ
    2. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಹುಮನಾಬಾದ
    3. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ಹುಮನಾಬಾದ

    ನ್ಯಾಯವ್ಯಾಪ್ತಿ

    5448 ಚದರ ಕಿಲೋಮೀಟರ್ಗಳಷ್ಟು ವಿಸ್ತಾರವಾದ ಭೂಪ್ರದೇಶವನ್ನು ಹೊಂದಿರುವ ಇಂದಿನ ಬೀದರ ಜಿಲ್ಲೆ 17 ರಿಂದ 35 ರ ಮತ್ತು 18o 25!! ಉತ್ತರ ಅಕ್ಷಾಂಶಗಳು ಮತ್ತು 760 42!! ನಿಮಿಷಗಳು ಮತ್ತು 770 39!! ಪೂರ್ವ ರೇಖಾಂಶ ನಡುವೆ ಇದ್ದು, ಪೂರ್ವದಲ್ಲಿ ಆಂಧ್ರಪ್ರದೇಶದ ನಿಜಾಮಾಬಾದ್ ಮತ್ತು ಮೇದಕ್ ಜಿಲ್ಲೆಗಳು ಮತ್ತು ಪಶ್ಚಿಮದಲ್ಲಿ ಮಹಾರಾಷ್ಟ್ರದ ನಾಂದೇಡ್ ಮತ್ತು ಒಸ್ಮಾನಾಬಾದ್ ಜಿಲ್ಲೆಗಳು. ದಕ್ಷಿಣದಲ್ಲಿ ಕರ್ನಾಟಕದ ಗುಲ್ಬರ್ಗಾ ಜಿಲ್ಲೆ ಇದೆ. ಈ ರೀತಿ ಡೆಕ್ಕನ್‌ ಪ್ರಾಂತ್ಯದ ಕೇಂದ್ರದಲ್ಲಿದ್ದುದರಿಂದ, ಬೀದರ್ ಡೆಕ್ಕನ್‌ ಇತಿಹಾಸದಲ್ಲಿ ಬಹು ಪ್ರಮುಖತೆ ಪಡೆದಿದ್ದರು ಪ್ರಸ್ತುತ ಅದು ಶತಮಾನಗಳ ನಿರ್ಲಕ್ಷ್ಯ ಮತ್ತು ನಾಶದ ಚಿತ್ರವನ್ನು ಪ್ರತಿಬಿಂಬಿಸುತ್ತಿದೆ.

    ಮೂಲಸೌಕರ್ಯ

    1. (ಎ) ಕಂಪ್ಯೂಟರ್ ಸರ್ವರ್ ಕೊಠಡಿ.
    2. (ಬಿ) ನ್ಯಾಯಿಕ ಸೇವಾ ಕೇಂದ್ರ.
    3. (ಸಿ) ವಿಡಿಯೋ ಕಾನ್ಫರೆನ್ಸ್ ಹಾಲ.
    4. (ಡಿ) ಮಧ್ಯಸ್ಥಿಕೆ ಕೇಂದ್ರ.
    5. (ಇ) ಫೈಲಿಂಗ್ ಮತ್ತು ವಿಚಾರಣೆ ಕೌಂಟರ್ (ಮಾರ್ಚ್ 2003 ರಿಂದ ಕಾರ್ಯನಿರ್ವಹಿಸುತ್ತಿದೆ)